The glory of Lord Mailaralinga’s song in Kannada has been sung by my mother’s immediate and extended family for decades. This song was taught by a relative called Sri Shankar who lived with my mother’s family for a while. The whole song is a summary of Lord Mailaralinga’s (Lord Shiva or Khandoba) story on how he won the war against the demons Manikasura and Mallasura. You get goosebumps when this song is sung in high pitch holding the torches by a group of people. It fills you with hope and energy.
This song is sung during the Guddadadevaru celebration (ritual of bringing Lord Mailaralinga home and offering prayers) and during Navratri (Dasara) and Bharat Hunnime.
The antique idol of Lord Mailaralinga is in the center. Picture taken in my cousin’s house at Kurtakoti.
Here is the lyrics of the song in Kannada script.
ಮೈಲಾರದೇವರ ಹಾಡು
ಪಾಲಿಸೈ ಭಂಡಾರ ರುಚಿರಂಗಾ ಮೈಲಾರಲಿಂಗ ।। ಪ
ಏಳು ಕೋಟಿ ಪ್ರಮಥ ಸಂಗ
ಮೂಲ ಶ್ರುತಿ ವಾಹನ ತುರಂಗ
ನೀಲಶೈಲ ನಿವಾಸ ಗಂಗಾ
ಮಾಲ್ಹಸ ಹೃದಯಾಬ್ಜ ಬೃಂಗಾ ।।೧।।
ಮಲ್ಲ ಮಣಿಕಾಸುರರು ಮುನಿವರರಾ
ಘಾಲ್ಲಿಸಲು ಪೂರಾ ತಲ್ಲಣಿಸುತವರಿಂದ ಹರಿಯ ಜರಾ
ಬಲ್ಲಂಥ ನಿರ್ಝುರರಲ್ಲಿ ಕಾಣದೆ ದನುಜ ಮರ್ದನರಾ
ಅಲ್ಲಿಂದ ಸುರರಾ, ಸಲ್ಲಲಿತದಳ ಸಹಿತ ಗಿರಿಜಾ
ವಲ್ಲಭನ ತವಚರಣವಾರಿಜ
ದಲ್ಲಿ ಗೈತಂದೆರಗಿನುತಿಸುವರೆಲ್ಲರನು ಕರುಣಿಸಿದಿಯೋ ದೇವಾ ।।೨।।
ನೀಲಗುದುರೆಯ ನೇರಿ ನಡೆಯುತಿರೆ
ಸಾಲ್ಗಟ್ಟಿ ಸುರರಾ ನಾರಿಯರು ಚಾಮರವ ಬೀಸುತಿರೆ
ಮೇಲ್ದಪ್ಪಿ ಗೊರವರ ಟೋಳಿ ಎಂಬ ಸಮುದ್ರ ಉಕ್ಕುತಿರೆ
ಮಲ್ಹಾರಿ ಭಳಿರೆ ಕಾಲ ಹರ ಜಯವೆಂದು ಪಾಠಕ
ಮೇಳದವರುಗ್ಗಳಿಸಿ ನುಡಿಯುತಿರೆ
ಕಾಳಿ ಭೇರಿ ನಗಾರಿ ಹೊಡೆಯುತಿರಾಲಿಗಡಚಿಕ್ಕಿದವೊ ದೇವ ।।೩।।
ಪುಂಡದಾನವರಾಟವನು ಕೇಳಿ ಬಹು
ಗಂಡುಗಲಿ ಮಾರ್ತಾಂಡ ಭೈರವ ರೂಪವನು ತಾಳಿ ಖತಿ
ಗೊಂಡ ಕ್ಷಣದಲ್ಲಿ ಚಂಡಿಕಾ ಘ್ರತಮಾರಿ ಮಹಾ ಕಾಳಿ
ಮಂಡಿಸಿದಳೆಡದಲಿ ಚಂಡ ಭೂತ ಪ್ರಮಥ
ಗೊರವರ ದಂಡು ಸಹಷಣ್ಮುಖಗಜಾನನ
ಪುಂಡರೀಕಾಕ್ಷಾದಿ ಮಂತ್ರಕ ಮಂಡಲದ ಮಧ್ಯದೊಳ್ ಮೆರೆಯುವಾ ।।೪।।
ಘುಡುಘುಡಿಪ ವಿಕ್ರಾಳ ಭೂತಗಳಾ ಕಾಡುಮುಳಿದು ದೈತ್ಯರ
ಕಡಿದು ಕೆಡಹುವ ಸಾರಮೇಯಗಳಾ ಜಗದೊಡೆಯನರ್ಭುದ
ಸಿಡಿಲಿಗಿಮ್ಮಡಿ ಬಿಡುವ ಬಾಣಗಳಾ
ಖಡಕಾಯ್ತು ಜಗಳ
ಕಿಡಿಸುರಿವ ಘ್ರತಮಾರಿ ಕಣ್ಣೊಳ್ ಅಡಗಿಸಿದವು ಭ್ರಹ್ಮಾಂಡ ತತಿಗಳು
ನಡುನಡುಗಿ ರಕ್ಕಸರು ರಣದೋಳ್
ಮಡಿದರೈ ಕೋಟ್ಯಾನು ಕೋಟಿ ।।೫।।
ವೀರಮಣಿ ಮಲ್ಹಾಸುರರು ತಾಗಿ ಘ್ರತಮಾರಿಯೊಂದಿಗೆ
ಘೋರಸಮರವ ಮಾಡುತಿರಲಾಗಿ ಮದನಾರಿ
ನಾರಿಗೆ ಕ್ರೂರದೈತ್ಯರ ಬಾಣಗಳು ಮುಸುಕೀ ಕೈಮೀರಲಾಗಿ
ದೂರದಿಂ ನೀ ನೋಡಿ ಸಾಯಕ ಸಾರದಿಂದ ಸುರಾಗ್ರಗಣ್ಯರ
ಪಾರುಪತ್ಯವ ಮಾಡಿ ನೆತ್ತರ ಕಾರಿಸಿದೋ ವೀರಾದಿವೀರಾ ।। ೬।।
ಯುಧ್ಧದೊಳು ಮಣಿಮಲ್ಲರನು ಜೈಯಿಸಿ
ಉಧ್ಧರಿಸಿ ನಿನ್ನಯ ಮುದ್ದು ಪಾದವ ಶಿರದಮೇಲಿರಿಸಿ
ಅವರಿದ್ದ ಶ್ರೀಮಣಿಕಾದ್ರಿ ಮೈಲಾರದೊಳು ವಿಸ್ತರಿಸಿ
ಲಿಂಗಗಳ ಸ್ಥಾಪಿಸಿ
ಸಿಧ್ಧಿ ಬುಧ್ಧಿ ಪವಾಡ ಕಾರ್ಣಿಕ ಸಿಧ್ಧರಿಂ ಸಿರಿಗಂಬ ನಿಲ್ಲಿಸಿ
ಸಿಧ್ಧಿ ಗುಣ ಜಗದಿ ಪ್ರಸಿಧ್ಧ ವರಕೃತುಕೋಟಿನಾಥಾ ।।೭।।
Click here to read about Mailara Lingeshwara Temple at Devara Gudda.