In Mysore, during Dasara festival, there is a tradition of arranging dolls on 7 steps or 9 steps.
Various dolls passed on from generations are removed from boxes, dusted, and arranged according to themes or in a freestyle arrangement. The king and the queen dolls are decorated with new clothes and jewellery and take a prime spot in the arrangement along with gods, goddesses, common man, birds, animals, royal horse, royal elephant, carriages, and so on.
Neighbors, friends, and relatives are invited for the evening arathi. At the time of arathi songs are sung in praise of gods and goddesses.
My mother has written an exclusive song for the dolls arrangement in Kannada.
ಗೊಂಬೆ ಆರತಿ ಹಾಡು
ಆರುತಿ ಬೆಳಗಿರಿ ಜಗದಂಬೆಗೆ ।
ವರನಾರಿಯರೂ ಪರಮಾದರದಿ ।।ಪ||
ಮಧ್ಯದಿ ದೇವಿಯು ಸೂತ್ರವ ಹಿಡಿದು ।
ಆಡಿಸಿವಳು ಬೊಂಬೆಯತರದಲಿ ಮೂಜಗವಾ ।।ಪ।।
ರಾಮಾಯಣವು ತೋರುವುದಿಲ್ಲಿ ।
ಭಾರತ ಕಥೆಯನು ಹೇಳುವುದು ।
ಕೃಷ್ಣನ ಲೀಲೆಯ ನೋಡು ವೆವಿಲ್ಲಿ|
ಋಷಿಮುನಿಗಳನೂ ಕಾಣುವೆವು ।।೧।।
ಚಂದ್ರನ ಜಟೆಯಲಿ ಧರಸಿಹನು ।
ಗಂಗೆಯ ಭೂವಿಗೆ ಬಿಟ್ಟಿರುವಾ ।
ನಾಟ್ಯವನಾಡುವ ನಟರಾಜನು ತಾ ।
ಬೇಡಿದ ವರಗಳ ನೀಡುವನು ।।೨।।
ನಸುನಗುತಿರುವಳು ಸಿರಿದೇವಿ ।
ಜ್ಞಾನವ ಕೊಡುವಳು ವಾಗ್ದೇವಿ ।
ಕೈಗಳ ಮುಗಿಯುತ ಸಿರವನುಬಾಗುತ ।
ನೋಡಿರಿ ದೇವಿಯರ ।। ೩।।
ಸಿಂಹಾಸನದಲಿ ರಾಣಿಯು ಸಹಿತ ।
ಆಳಿದ ಅರಸರು ಕುಳಿತಿಹರು ।
ಆನೆ ಕುದುರೆ ವಂಟೆಯ ಸಾಲು ।
ಸೈನ್ಯವು ಸಿಸ್ತಿಲೆ ನಿಂತಿಹುದು ।। ೪ ।।
ವನದಲ್ಲಿರುವ ಪಶು ಪಕ್ಷಿಗಳು ।
ವೈರವ ಮರೆತು ಬಂದಿಹವು ।
ಜಗದಲ್ಲಿರುವ ಜನಸಮುದಾಯವು ।
ನೆರೆದಿದೆ ನೋಡಿರಿ ಓಂದೇಕಡೆ ।।೫।।
ಸ್ತ್ರೀಯರಿಗೆ ಅರಿಶಿನ ಕುಂಕುಮ ।
ಕಿರಿಯರಿಗೆಲ್ಲ ಸವಿ ತಿನಿಸುಗಳು ।
ಹಿರಿಕಿರಿಯರು ಎನ್ನದೆ ಎಲ್ಲರೂ ।
ಹರುಷದಿ ನೋಡಿರಿ ಗೊಂಬೆಗಳ ।।೬।।