Hanuman Arathi Song – Hanumanthana Aarathi Haadu – Devotional Song

Hanuman

Hanuman Jayanthi is celebrated in April in North India and in December in South India.  North or South a song is always sung during the Arathi.

This song in praise of Lord Hanuman is written by my mother in Kannada script:

ಹನುಮಂತನ ಹಾಡು

ಜಯ ಜಯ ಹನುಮಂತ
ಜಯ ಜಯ ಬಲವಂತ । ಜಯ ಜಯ ವಾಯು ಸುತ ।

ಚಂಚಲವಾದ ಕಪಿ ಜನ್ಮವತಾಳಿ| ನಿಶ್ಚಲ ಚಿತ್ತದಲಿ
ಹೃದಯದಿ ರಾಮನ ಸ್ಥಿರಗೊಳಿಸಿದ
ಭಕ್ತ ಶಿರೋಮಣಿ ನೀನು ।। ಜಯ ಜಯ ಹನುಮಂತ

ಒಂದೆ ನೆಗತಕೆ ಸಾಗರ ದಾಟಿ । ದುಃಖಾತೆಯಾಗಿರುವ
ಸೀತಾಮಾತೆಗೆ ಅಭಯವ ನೀ ಕೊಟ್ಟೆ ।। ಜಯ ಜಯ ಹನುಮಂತ

ಲಂಕಾರಾಜನ ಅಹಂಕಾರಕೆ । ಬೆಂಕಿಯನು ಇಟ್ಟೆ
ತಾಪದಿ ಬಳಲುವ ರಾಮಗೆ ಶುಭವಾರ್ತೆಯ ಕೊಟ್ಟೆ ।। ಜಯ ಜಯ ಹನುಮಂತ

ರಾಮನಾಮವು ಬರೆದು ಬಂಡೆಯ ತೇಲಿಸಿದೆ
ಶೃಧಾ ಭಕ್ತಿಗೆ ಸರಿಯಾವುದು ಇಲ್ಲೆಂಬುದನು
ಜಗಕೆಲ್ಲ ತೋರಿಸಿದೆ ।। ಜಯ ಜಯ ಹನುಮಂತ

Related Images:

Related Post