This is a beautiful song written by Sri Purandara Dasaru to sing during the head oiling ritual, which is the beginning of auspicious occasions like festivals, weddings, upanayana (sacred thread ceremony), and so on. Tomorrow evening is the beginning of Diwali when all the people in the house sit together and elders perform the “Oiling ritual” and while doing Arathi, this song is sung.
ಬಣ್ಣಿಸಿ ಗೋಪಿತಾ ಹರಸಿದಳು|
ಎಣ್ಣೆಯನಿಕ್ಕುತ ಯದುಕುಲತಿಲಕಗೆ| ಪ ।
ಆಯುಷ್ಯವಂತನಾಗೋ ಅತಿಬಲ್ಲಿದನಾಗೊ ।
ದುಷ್ಟಖಳರ ಮರ್ಧನನಾಗೋ ।
ರಾಯರ ಪಾಲಿಸೋ ರಕ್ಕಸರ ಸೋಲಿಸೋ ।
ವಾಯುಸುತಾನಿಗೆ ಒಡಯನಾಗೆನುತಲೆ ।।೧।।
ಧೀರನು ನೀನಾಗೋ ದಯಾಂಬುಧಿಯಾಗೊ ।
ಆ ರುಕ್ಮಿಣಿಗೆ ನಿ ಪತಿಯಾಗೊ ।
ಮಾರನ ಪಿತನಾಗೊ ಮಧುಸೂದನನಾಗೊ ।
ಆ ದ್ವಾರಕೆಗೆ ನಿ ದೊರೆಯಾಗೆನುತಲಿ ।।೨।।
ಅಚ್ಯುತ ನೀನಾಗೊ ಅನಂತ ನೀನಾಗೊ ।
ಜ್ಞಾನಿವಂತನಾಗೊ ದಯವಾಗೊ ।
ಶ್ರೀನಿವಾಸನಾಗೊ ಶ್ರೀಧರ ನೀನಗೊ ।
ಜ್ಞಾನಿ ಶ್ರೀ ಪುರಂದರ ವಿಠಲನಾಗೆನುತಲಿ ।।೩।।