It is a must to read the story of Satyanarayana at the end of Satyanarayana pooja. Here is a song covering all the stories that has to be read. You can sing this while doing the final neelanjana aarathi.
ಸತ್ಯನಾರಾಯಣ ಆರತಿ ಹಾಡು
ಶ್ರೀ ಸತ್ಯನಾರಾಯಣ ಜಯ ಜಯ ।।ಪ|।
ಶ್ರೀ ಲಕುಮಿ ರಾಮಣ ದಯಾಘನಾ ।।ಅ. ಪ।।
ಜಗಹಿತ ಕಾರ್ಯಕೆ ನಾರದ ಜಗದೊಳು
ಜನ ಬಹು ಬಳಲೊದು ಕಂಡು ।।ನಾರದಾ।।
ಸತ್ಯದೇವ ನಿನ್ನ ಅರ್ತಿಯಿಂದ ಪೂಜಿಸಲು
ಜಗವ ನುಧ್ಧರಿಸಿದರು ।।೧।। ।।ದಯಾಘನಾ।।
ಕ್ಷುದೆಯಿಂ ಪೀಡಿತ ಕಾಶಿ ಭೂಸುರನಿಗೆ
ಬಗೆ ಬಗೆ ಸುಖಗಳನ್ನಿತ್ತಿ ।।ನಾರಾಯಣ।।
ಬಡವನೆಂದು ಕಾಷ್ಟಕ್ರೀತನ ನೋಡದೆ
ಎಡಬಿಡದಲೆ ಕಾಯ್ದು ।।೨।। ।।ದಯಾಘನಾ।।
ಪತಿ ಬಂದ ವಾರ್ತೆ ಕೇಳಿ ಕಾಲಾವತಿಯು
ನಿನ್ನ ಪ್ರಸಾದವ ಸೇವಿಸದೆ ಬರಲು ।।ಕಲಾವತಿ|।
ಪತಿ ಗತಿಯಾದ ವಾರ್ತೆ ಕೇಳಿ ದುಃಖಿತಳಾಗಿ
ಸತಿ ಹೋಗ ಲಾಗ ಕಾಯ್ದೆ ।।೪।। ।।ದಯಾಘನಾ।।
ಗೋಪಾಲರು ತಂದ ಪ್ರಸಾದವ ಸೇವಿಸದೆ
ಭೂಪತಿ ಅಂಗಧ್ವಜ ಬರಲು ।।ಸೇವಿಸದೆ।।
ಅಪಾರ ದುಃಖಿತನಾಗಿ ಪ್ರಸಾದ ಸೇವಿತನಾಗಿ
ಭೂಪಾಲ ಸುಖಿಸಿದನು ।।೫।। ।।ದಯಾಘನಾ।।
ಜಗದೊಧಾರನ ಜಾನಕಿರಾಮ ನಾನಾ
ಧನ ಮದದಿ ಸಾಧು ನಿನ್ನವೃತ ಮರೆಯಲು
ಘನತಾಪದಿ ಬಳಲಿದನು ।।ವಾಣಿಜನು||
ದೀನನಾಗಿ ಯತಿ ಆದಿ ನಿನ್ನ ಮಿಸಲು
ಕ್ಷಮಿಸಿ ಸುಖವನ್ನಿತ್ತಿ ।।೩।। ದಯಾಘನ
ಪತಿ ಬಂದ ವಾರ್ತೆ ಕೇಳಿ ಕಲಾವತಿಯು
ನಿನ್ನ ಪ್ರಸಾದವ ಸೇವಿಸದೆ ಬರಲು ।।ಕಲಾವತಿ।।
ಪತಿಗತಿಯಾದ ವಾರ್ತೆ ಕೇಳಿ ದುಃಖತಳಾಗಿ
ಸತಿ ಹೋಗ ಲಾಗ ಕಾಯ್ದೆ ।।೪।। ದಯಾಘನ
ಗೋಪಾಲರು ತಂದ ಪ್ರಸಾದವ ಸೇವಿಸದೆ
ಭೂಪತಿ ಅಂಗಧ್ವಜ ಬರಲು ।।ಸೇವಿಸದೆ।।
ಅಪಾರ ದುಃಖತನಾಗಿ ಪ್ರಸಾದ ಸೇವಿತನಾಗಿ
ಭೂಪಾಲ ಸುಖಸಿದನು ।।೫।। ದಯಾಘನ
ಜಗದೋಧ್ಹಾರನ ಜಾನಕಿರಮಣನ
ವಿನಯದಿ ಬೇಡಿಕೊಂಬೆ ।।ರಮಾನಿನ್ನ||
ಜನನ ಮರಣದಿಂದ ಬಿಡಿಸಿ
ನಿನ್ನ ಚರಣ ಕಮಲದೊಳಿರಿಸೆನ್ನ ।।ದಯಾಘನ।।