This bhajan is sung during the Aarathi in Sridhara Ashrama. Sri Sridhara Swamiji is considered the avatar of Dattatreya. His samadhi and ashram is located in Varadahalli, Sagar taluk. There are many ashram dedicated to the swamiji in other places too.
ಶ್ರೀಗುರುಭಜನೆ ಪೂರ್ಣದಾರತಿ
ಜಯದೇವ ಜಯದೇವ ಜಯ ಶ್ರೀ ಗುರುವರಗೇ
ಜಯ ಸದ್ಗುರುವರಗೇ |
ಜಯ ಜಯ ನಿತ್ಯನಿರಂಜನ ನಿರುತಾನಂದನಿಗೆ
ಜಯದೇವ ಜಯದೇವ ||
ಮೂರು ಗುಣಗಳ ಕಾರ್ಯದಿ ಸೇರದಿರುವವಗೆ
ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ
ಧೀರನಾಗಿಹ ಚಿತ್ಸುಖ ಸಾರರೂಪನಿಗೆ
ನಾರೀನರ ಭೇದಗಳ್ಮತಿ ತೋರದ ಪ್ರಭುವರಗೆ
ಗಣನೆಗೆ ಸಿಗದಿಹನಗಣಿತ ಘನಚಿದ್ರೂಪನಿಗೆ
ದಿನಮಣಿ ಶಶಿವಹ್ನಿಹಗಳನು ಅನುದಿನ ಬೆಳಗಿಪಗೆ
ಜನಿಮೃತಿ ಇರದಿಹನದ್ವಯ ಚಿನುಮಯನೆನೆಸಿಹಗೆ
ಮುನಿಜನ ಹೃದಯವಿಹಾರಿಗೆ ಘನಗುರು ಮೂರುತಿಗೆ ||೨||
ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೆ
ನಿಜ ಜೀವೇಶ್ವರಿಗಾಶ್ರಯ ತ್ರಿಜಗವ್ಯಾಪಕಗೆ
ಅಜ ಹರಿಹರ ಜಗವಂದಿತ ಭಜಕರ ಸಲಹುವಗೆ
ಸುಜನರ ನಿಜಮೃದುಹೃದಯದಿ ವಿಜಯದಿ ನಲಿಯುವಗೆ
ಸಾಧನೆಯಿಂ ಪರಿಪಕ್ವದ ಸಾಧಕ ಜನಮನಕೆ
ಮೋದದಿ ತನ್ನಯ ತತ್ವದ ಬೋಧವನರುಹಲಿಕೆ
ಆದಿ ಮೂರುತಿ ಶ್ರೀ ಪ್ರಭು ತಾ ದಯಗೊಳ್ಳುತಲಿ
ಮೇಧಿನಿಯೊಳಗವತರಿಸಿಹ ಶ್ರೀಧರ ನಾಮದಲಿ
ಜಯದೇವ ಜಯದೇವ||
****
ರಾಮ ರಾಮ ರಾಮ ರಾಮ ರಘುನಂದನ ರಾಮ
ರಘುನಂದನ ರಾಮ ರಾಮ ರಾಮ ರಾಮ ಕುಲಭೂಷಣ ||ಪ||
ರಾಮ ರಾಮ ರಾಮ ರಾಮ ಜಾನಕೀಪತೇ ರಾಮ ಜಾನಕೀಪತೇ
ರಾಮ ರಾಮ ರಾಮ ರಾಮ ವಿಮಲಮತೇ
ರಾಮ ರಾಮ ರಾಮ ರಾಮ ದೀನವತ್ಸಲ | ರಾಮ ಭಕ್ತವತ್ಸಲ
ರಾಮದಾಸ ಸ್ಮರಣೆ ತುಝೆ ಆಗಮ್ಯಾಲ್ಹೀಲಾ |
ರಾಮ ರಾಮ ರಾಮ ರಾಮ ಹೋ ಜಯರಾಮ್ ಹೋ
ತಾರಿ ತಾರಿ ತಾರಿ ತಾರಿ ರಾಮ್ ಹೋ | ರಾಮ| ತೋಡಿ ತೋಡಿ
ತೋಡಿ ತೋಡಿ ಭವಪಾಶೋ | ರಾಮ | ಭವ ಪಾಶೋ
ಅನನ್ಯ ಶರಣರಾಮೀ ರಾಮದಾಸ್ ಹೋ |
ರಾಂ ರಾಂ ರಾಂ ರಾಂ ಜಪ ಸೀತಾಭೀರಾಮ್ | ಜಪ
ಸೀತಾಭಿರಾಮ್ | ರಾಂ ರಾಂ ರಾಂ ರಾಂ ಜಪ ಸೀತಾಭೀ ರಾಂ
ಸಜ್ಜನಗಡ ನಿವಾಸಮಾಝೇ ರಾಮದಾಸ ಮಾಯೆ | ಮಾಝೆ
ರಾಮದಾಸ ಮಾಯೇ | ಮಾಝೇ ರಾಮದಾಸ ಮಾಯೇ |
ಶ್ರಮಹರಣ ನಿವಾಸಮಾಝೇ ಕಲ್ಯಾಣ ಮಾಯೇ | ಮಾಝೇ
ಕಲ್ಯಾಣ ಮಾಯೇ | ಕಲ್ಯಾಣ ಮಾಯೇ | ಮಾಝೇ |
ಕಲ್ಯಾಣ ಮಾಯೇ |
ಸರಯೂ ತೀರನಿವಾಸ ಮಾಝೇ ರಾಮಚಂದ್ರ ಮಾಯೇ ಮಾಝೇ
ರಾಮಚಂದ್ರ ಮಾಯೇ ಮಾಝೇ ರಾಮಚಂದ್ರ ಮಾಯೇ |
ವಿಶ್ವಂಬರಿನಿವಾಸ ಮಾಝೇ ಶ್ರೀಧರ ಗುರು ಮಾಯೇ |
ಮಾಝೇ | ಶ್ರೀಧರ ಗುರುಮಾಯೇ | ಶ್ರೀಧರ ಗುರು
ಮಾಯೇ | ಮಾಝೇ ಶ್ರೀಧರ ಗುರು ಮಾಯೇ
ವರದಾಪುರನಿವಾಸ್ ಮಾಝೇ ಶ್ರೀಧರ ಗುರುಮಾಯೇ |
ಮಾಝೇ || ಶ್ರೀಧರ ಗುರು ಮಾಯೇ | ಶ್ರೀಧರ ಗುರು
ಮಾಝೇ ಶ್ರೀಧರ ಗುರು ಮಾಯೇ ||
****
ಸೀತಾಕಾಂತ ಸ್ಮರನ ಜೈ ಜೈ ರಾಮ್ ||
ಸದ್ಗುರು ರಾಮದಾಸಸ್ವಾಮಿ ಮಹಾರಾಜ್ ಕೀ ಜೈ ||
ಮಹಾರುದ್ರ ಹನುಮಾನ್ ಕೀ ಜೈ ||
ಅಂಬಾಮಾತಾ ಕೀ ಜೈ ||
ಆರ್ಯಸನಾತನ ವೈದಿಕ ಹಿಂದೂಧರ್ಮಕೀ ಜೈ ||
ಜೈ ಜೈ ರಘುವೀರ ಸಮರ್ಥ
ಅವಧೂತ ಚಿಂತನ ಶ್ರೀ ಶ್ರೀಧರ ಗುರುದೇವ ದತ್ತ ||