Sri Lakshmi Narasimha Karaavalambam Sthotra in Kannada

Lord Narsimha

Sri Lakshmi Narasimha Karaavalambam Sthotra is written by Sri Jagadguru Adi Shankaracharya in Sanskrit, my grandfather Sri M.M.Patil has translated the Sthotra to Kannada.

ಶ್ರೀ ಲಕ್ಷ್ಮೀನರಸಿಂಹ ಕರಾವಲಂಬಂ ಸ್ತೋತ್ರ ಕನ್ನದ ಅನುವಾದ – ಮ್.ಮ್.ಪಾಟಿಲ್, ಕುರ್ತಕೋಟಿ; ಭಾಮಿನಿಷಟ್ಪದಿ

ಸಿರಿಸಹಿತ ಪಲ್ಗಡಲೊಳಿರುವನೆ।
ಕರದಿ ಚಕ್ರವ ಪಿದಿದವನೆ ಮೇ।
ಣುರಾಗ ಭೋಗ ಮಣೀಂದ್ರ ರಂಜಿತ ಪುಣ್ಯ ಮೂರುತಿಯೇ।।
ಪರಮ ಯೋಗಿಯೇ ನಾಶ ರಹಿತನೆ|
ಶರಣ ಭಾವಸಾಗರಕೆ ಚೈತ್ರನೆ।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ ॥೧।।

ಮರುತರುದ್ರ ಮಹೇಂದ್ರ ದಿನಕರ।
ವರವಿರಿಂಚಿ ಕಿರೀಟ ಕೋಟ ಗ।
ಳೆರಗೆ ನಿನ್ನಯ ಪಾದಪದ್ಮದ ಕಾನ್ಥಿಯನೆ ಕಂಡು।।
ಭಾರದಿನಾಚುಥಿರಲ್ಕೆ ಲಕ್ಷ್ಮಿಯ।
ವರ ಕುಚಾಂಬುಜ ರಾಜ ಹಂಸನೆ।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ॥೨।।

ಧರಣಿ ಪತಿ ಸಂಸಾರ ಜಾಲದೋ।
ಳುರುಲಿ ಬಿದ್ದನಿ ಗಿಂದ್ರಿಯಾರ್ಥಮೆ।
ಕೊರಳಿನಲಿ ನಟ್ಟಿರುವ ಗಾಳದ ಮೀನಿನಂತಿಹಗೆ।।
ಕೊರಳ ಸೆರೆ ನೆರೆ ಬಿಗಿದು ನಡುಗುವ।
ಶಿರದ ಭಯ ಭೀತನಿಗೆ ಕ್ರುಪೆಯೋಳು।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ॥೩।।

ಸಲೆ ಭಯಂಕರ ಭವದ ಕೂಪದ।
ಕುಲಿಯಗಾಧದ ತಳವ ಕಾಣುತ।
ಬಳಲಿ ದುಃಖ ಶತಾಹಿ ದಂಷ್ಟ್ರ ಕರಾಳಪೀಡಿತಗೆ।।
ತಿಳಿದು ನೀನೆ ಗತಿಯೆನುತ ಪದ।
ತಲವ ನಾಶ್ರಯಿಸಿದಗೆ ನಿಜ ಕರ।
ತಲವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ॥೪।।

ಭವಭಯಂಕರ ಮದಕರೀಂದ್ರನ।
ತವೆ ಕರಾಘಾತದೊಳು ನೋಯುತ।
ಬವನೆಗೊಂಡ ಶರೀರ ಧಾರಿಗೆ ಸರ್ವದುಃಖಹರ।।
ಜವಾನ ಮುನ್ನುಗ್ಗುವಿಕೆ ಭಯದೊಳು।
ಭವದ ಭೀತಿ ಸಮಾಕುಲಗೆ ಮಾ।
ಧವಕರಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ॥೫।।

ನೆರೆಭವಾಹಿ ಕರಾಳವಕ್ತ್ರದ।
ಹರಿತಹಲ್ಲಿನ ತೀವ್ರ ವಿಷದೊಳ।
ಗುರಿದು ನಷ್ಟ ಶರೀರನಾಗಿಹ ನನಗೆ ವಹಿಲದೊಲು।।
ಗರುಡವಾಹನ ಸುಧೆಯ ಸಾಗರ।
ವರನಿವಾಸ ಮುಕುಂದ ಶೌರಿಯೆ।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ॥೬।।

ನಿರುತ ಪಾಪದ ಬೀಜದಿಂದಂ|
ಕುರಿಸಿ ಕಾರಣಗಳೆಂಬ ಪರ್ಣವ।
ಧರಿಸಿ ನಾನಾ ಕರ್ಮವೆಂಬುವ ಶಾಖೆ ಶತಸಹಿತ।।
ಸ್ಮರ ಕುಸುಮಗಳ ದುಃಖ ಫಲಗಲ।
ನೆರೆ ಭವದ ತರುವೇರಿ ಬೀಳ್ವಗೆ।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ॥೭।।

ಉರುಭಯಂಕರ ಭವದವಾಗ್ನಿಯ ।
ಭರದ ತಾಪದಿಸುಟ್ಟ ನವಿರಗೆ।
ಪರಿತಪಿಸಿ ಪರಿತಂದು ತಂಪನು ಬಯಸಿ ಬಂದವಗೆ।।
ಹರಿಯೆ! ನಿನ್ನಯ ಪಾದಸರವ।
ನ್ನರಸಿ ಭಾರದೊಳು ಬಂದ ದೀನಗೆ।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ॥೮।।

ಭವಸಮುದ್ರದ ವಿಶಯವೀಚೀ।
ನಿವಹದೊಳು ಸಂತ್ರಸ್ತನಾದಗೆ।
ತವ ಕರಾಳ ತಿಮಿಂಗಲೊಗ್ರ ಗ್ರಾಹಗಳ ಮುಖದ।।
ದವದೆಯಲಿ ಸಿಲಿಕುತ್ತ ಜೀವ।
ಚ್ಛವದಿನಿರುವಗುಪಾಯರಹಿತಗೆ।
ತವ ಕರಾಸರೆಯನ್ನು ಕೊಡು ನೀ ಲಕುಮಿ ನರಸಿಂಹ॥೯।।

ಮುಳುಗುತಂ ಸಂಸಾರ ಸಾಗರ।
ದೊಳಗೆ ಮೂಢ ಮನಸ್ಕನಾದನ।
ತಿಳಿಯದಜ್ಞನ ದೀನನಂ ನೆರೆನೋಡು ಕೃಪೆಯಿಂದ।।
ಬಳಲಿದನ ಪ್ರಲ್ಹಾದ ಖೇದವ।
ಕಳೆಯೆ ನೀನವತರಿಸಿದವನೇ।
ಸಲೆ ಕರಾಶ್ರಯನ್ನು ಕೊಡು ನೀ ಲಕುಮಿ ನರಸಿಂಹ॥೧೦।।

ನೆರೆ ಭವಾಟವಿ ಘೋರ ಗಹನದೆ।
ಚರಿಪೆನೆಗೆ ಮದನೋಗ್ರ ಮೃಗದಿಂ।
ಹರಿಯೆ! ಬಹುತರ ನೊಂದ ಚಿತ್ತದಿ ಗಾಸಿಯಾದವಗೆ।।
ತರ ತರದ ದುಃಖಾರ್ತಗಂ ಮ।
ತ್ಸರ ನಿದಾಘದ ತಾಪ ತಪ್ಪಗೆ।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ॥೧೧।।

ಭವದ ಪಾಶದ ತೊಡಕಿನವನನು।
ಜವನ ಭಟರುರೆ ಜಬರಿಸುತ ಹ।
ಗ್ಗವನು ಕೊರಳಿಗೆ ಕಟ್ಟಿ ಜಗ್ಗುವರೆನ್ನ ಪರವಶನ।।
ತವೆ ಚಕಿತನನ್ನೋಬ್ಬನನು ಮಾ।
ಧವ ದಯಾಲುವೆ! ನೀನು ಕೃಪೆಯಿಂ।
ತವ ಕರವನಾಸರೆಗೆ ಕೊಡು ನೀ ಲಕುಮಿ ನರಸಿಂಹ॥೧೨।।

ಯಜನದಧಿಪತಿ ಕಮಲನಾಭನೆ।
ಯಜನ ರೂಪನೆ ವಾಸುದೇವನೆ।
ದ್ವಿಜರ ಪ್ರಿಯ ಕೆಶವನೆ ಮಧುಸೋದನನೆ ಗೋವಿಂದ।।
ಅಜಪಿತನೆ ಲಕ್ಷ್ಮೀ ಪತೆ ಮೇಣ್।
ವಿಜಯ ಸಖನೆ ಮುಕುಂದ ಮಾಧವ।
ನಿಜಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ ॥೧೩।।

ಒಂದು ಕೈಯಲ್ಲಿ ಚಕ್ರವನು ಮ।
ತ್ತೋoದು ಕೈಯಲಿ ಶಂಖವನು ಮೇ।
ಣೊoದು ಕೈಯನು ಪಾಲಗಡಲಿನ ಮಗಳ ಮೇಲಿಟ್ಟು।।
ನಿಂದು ವರದಾ ಭಯದ ಹಸ್ತದ।
ಸುಂದರಾಂಬುಜ ರಾಜ ಚಿನ್ಹದಿ।
ಸಂದ ಕರವಾಸರೆಗೆ ಕೊಡು ನೀ ಲಕುಮಿ ನರಸಿಂಹ ॥೧೪।।

ವರವಿವೇಕ ಮಹಾನಿಧಿಯನಿಪ।
ಹರಿಸಿದರು ಬಳದಿಂದಲಿಂದ್ರಿಯ।
ವರ ಭಯಂಕರ ಚೋರರದಕಾನಂಧ ನಂತಿರ್ದು।।
ನಿರುತ ಮೋಹನ ಕೂಪ ಕುಳಿಯೊಳು।
ಭರದಿ ಕೆಡವಿದ ನನಗೆ ಪ್ರಭುವೇ।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ ॥೧೫।।

ವ್ಯಾಸ ನಾರದ ಪುಂಡರೀಕ ಪ।
ರಾಶರ ಪ್ರಲ್ಹಾದ ಮೊದಲಾ।
ದೈಸು ಭಕ್ತರ ಹೃತ್ಕಮಲದೊಳು ವಾಸ ಮಾಡಿದನೇ।।
ವಾಸುದೇವನೆ ಭಕ್ತ ಜನ ಪರಿ।
ತೋಷ ಮೂರುತಿ ಕಲ್ಪಪಾದಪ।
ನಾಸರಕೆ ಕೊಡು ಕರವನೀಹರಿ ಲಕುಮಿ ನರಸಿಂಹ ॥೧೬।।

ಧರೆಯೋಳೀಲಕ್ಷ್ಮೀನೃಸಿoಹನ।
ವರಮಹಾಸ್ತೋತ್ರವನು ಕಂಠದ।
ಲರಿತು ಪಠಿಪರು ಶುಭವ ಕಾಣ ಕಾಣ್ಬರು ಹರಿಪರಾಯಣರು।।
ಪರಮ ಸುಖವನ್ನನುಭವಿಸಿ ಮುರ।
ಹರಣ ಚರಣದಲೈಕ್ಯರವರಿಗೆ।
ಕರವ ನಾಸರೆಗಾಗಿ ಕೊಡು ನೀ ಲಕುಮಿ ನರಸಿಂಹ ॥೧೭।।

ಶ್ರೀ ರಮಾನರಸಿಂಹ ಪಾದಾಂ।
ಭೋರುಹ ಭ್ರಮರಾಂಕ ಶಂಕರ।
ಧಾರುಣೀ ಗುರುವಿಂದ ವಿರಚಿತವಾದ ಶ್ಲೋಕಗಲ॥
ಸಾರವನು ಮೈಲಾರಶರ್ಮನ।
ಪಾರ ಭಕ್ತಿಯ ಭರದಿ ಮುನ್ನೀ।
ರ್ಪೀರಿದನ ಗೋತ್ರಜನು ಕನ್ನಡಿಸಿದನು ನಿಷ್ಠೆಯಲಿ।।೧೮।।

Related Images:

Related Post