Deepavali song is written by my mother in Kannada script to be sung anytime during the Deepavali festival. The lyrics cover the importance and joy of celebrating Deepavali / Diwali festival.
ದೀಪಾವಳಿ ಹಾಡು
ದೀಪವ ಬೆಳಗುವ ಬಾರೇ ಸಖೀ
ದೀಪಾವಳಿಯು ಬಂದಿಹುದು ।।ಪ||
ನರಕಾಸುರನನು ಕೊಂದು ಕೃಷ್ಣ
ನಾರಿಯರ ಸೆರೆ ಬಿಡಿಸಿಹನು
ವಿಜಯೋತ್ಸವವಿದು ನಮಗಿಂದು
ಫಟಾಕಿಗಳನು ಸಿಡಿಸೋಣ ।।೧।।
ತಳಿರು ತೋರಣ ಕಟ್ಟೋಣ
ರಂಗವಲ್ಲಿಗಳ ಬಿಡಿಸೋಣ
ಶ್ರೀಪೀಠದಿ ಸ್ಥಾಪಿತವಾಗಿರವ
ಲಕ್ಷ್ಮೀಯ ಪೂಜೆಯ ಮಾಡೋಣ ।।೨।।
ವಟುವೇಷದಿ ತಾ ಬಂದಿಹನು
ತ್ರಿವಿಕ್ರಮನಾಗಿ ನಿಂತಿಹನು
ಭೂವಿಯಲಿ ದೀಪದ ಸಾಲು ಹಚ್ಚೋಣ
ನಭದಲ್ಲಿ ಮಿಂಚು ಹರಿಸೋಣ ।।೩।।
ಸೋದರರನ್ನು ಕರೆಯೋಣ
ನಲುಮೆಯ ಉಡುಗೊರೆ ನೀಡೋಣ
ಒಲುಮೆಯ ಜಗದಲಿ ತುಂಬೋಣ
ಎಲ್ಲರಿಗೂ ಹಿತ ಬಯಸೋಣ ।।೪।।
Three days festival theme in one song and concluded in siblings love really nice🙏
Thank you, Shanthala.